ಶ್ರೀ ಜೇನುಕಲ್ಲಮ್ಮ ದೇವಸ್ಥಾನ, ಅಮ್ಮನಘಟ್ಟ, ಕೋಡೂರು, ಹೊಸನಗರ, ಶಿವಮೊಗ್ಗ.

    ‘ಯಾ ದೇವೀ ಸರ್ವಭೂತೇಷು ಪ್ರಕೃತಿ ರೂಪೇಣ ಸಂಸ್ಥಿತಾ’ ಎಂಬಂತೆ ರಮ್ಯ - ಭವ್ಯ ಪ್ರಕೃತಿಯೈಸಿರಿಯ ಮಡಿಲಿನಲ್ಲಿ ಮೈದೋರಿ ನಿಂತಿರುವ ಜಗನ್ಮಾತೆಯೇ ಈ ಜೇನುಕಲ್ಲಮ್ಮ...!
    ‘ಜೇನು + ಕಲ್ಲು + ಅಮ್ಮ’ ಎಂಬಮೂರು ವಿಭಿನ್ನ - ವಿಶಿಷ್ಟ ಶಬ್ಧಾರ್ಥಗಳ ಸಂಗಮ ಈ ಮಹಾಮಾತೆ.ಅಂದರೆ ಕಡಿದಾದ ಕಲ್ಲಿನಬೆಟ್ಟ, ಅದರ ತುಂಬಾ ಅಲ್ಲಲ್ಲಿ ಕಟ್ಟಿರುವ ಹೆಜ್ಜೇನುಗಳ ಮೊತ್ತ, ಮಧ್ಯೆ ವಿರಾಜಮಾನಳಾಗಿದ್ದಾಳೆ ಈ ಅಮ್ಮ... ಅದಕ್ಕೇ ಮಲೆನಾಡಿನ ಮಕ್ಕಳ ಬಾಯಲ್ಲಿ ಈಕೆ ಜೇನುಕಲ್ಲಮ್ಮ...!
    ಇಡೀ ಹೊಸನಗರ ತಾಲ್ಲೂಕಿಗೆ ಅಂದರೆ ಮಲೆನಾಡಿನ ಹೃದಯ ಭಾಗಕ್ಕೆ ಈಕೆಯೇ ಕುಲದೈವ. ಅದರಲ್ಲಿಯೂ ಹುಂಚಾ ಹೋಬಳಿಯ ಹುಂಚಾ, ಸೊನಲೆ, ಕೋಡೂರು, ನಾಗರಕೂಡಿಗೆ, ಇಟ್ಟಕ್ಕಿ, ಹೊಸನಗರ, ಕೊಳಗಿ, ವಾರಂಬಳ್ಳಿ, ಎರಗಿ, ಕುಂಭತ್ತಿ.ಜೇನಿ-ಚಿಕ್ಕಜೇನಿ, ಮೇಲಿನಸಂಪಳ್ಳಿ, ಕಾಳಿಕಾಪುರ, ಬೆಣ್ಣಕ್ಕಿ, ಮಾವಿನಕಟ್ಟೆ, ಮುಂಬಾರು ಹೀಗೆ ಹತ್ತು ಹಲವಾರು ಹಳ್ಳಿಗಳಲ್ಲಿ ವಾಸಿಸುವ ಬಹುಸಂಖ್ಯಾತರಾದ ‘ದೀವರ’ ಜನಾಂಗಕ್ಕೆ ಈಕೆಯೇ ಹಡೆದಮ್ಮನೆಂದರೆ ಅತಿಶಯೋಕ್ತಿಯಲ್ಲ. ನಾವೆಲ್ಲಾ ಜೇನುಕಲ್ಲಮ್ಮ ತಾಯಿಯ ಒಕ್ಕಲು ಮಕ್ಕಳು ಎಂದು ಹೇಳಿಕೊಳ್ಳುವುದರಲ್ಲಿಯೇ ಅದೆಂಥದೋ ಸಂಭ್ರಮವಿದೆ ಅವರಲ್ಲಿ. 
‘ಯಾ ದೇವೀ ಸರ್ವಭೂತೇಷು ಪ್ರಕೃತಿ ರೂಪೇಣ ಸಂಸ್ಥಿತಾ’

ಶ್ರೀ ಜೇನುಕಲ್ಲಮ್ಮ ದೇವಸ್ಥಾನ, ಅಮ್ಮನಘಟ್ಟ, ಕೋಡೂರು, ಹೊಸನಗರ.
Sri Jenukallamma Temple, Ammanagatta, Koduru, Hosanagara.
www.jenukallamma.com
ಪೂಜಾ ಮತ್ತು ಸೇವಾ ವಿವರ.
ಪ್ರತಿ ಮಂಗಳವಾರ ಮತ್ತು ಶುಕ್ರವಾರ  ಪೂಜಾ ಸಮಯ ಬೆಳಿಗ್ಗೆ.
ಅಭಿಷೇಕ ಮತ್ತು ಕುಂಕುಮಾರ್ಚನೆ ಸಮಯ 
ಬೆ: 1೦ ರಿಂದ 11.3೦
  • ಮಂಗಳಾರತಿ
  • ಕುಂಕುಮಾರ್ಚನೆ
  • ವುಡಿ ತುಂಬುವುದು
  • ವಾಹನ ಪೂಜೆ
  • ಚಂಡಿಕಾ ಹವನ 
  • ಚಂಡಿಕಾ ಪಾರಾಯಣ
  • ಸತ್ಯನಾರಾಯಣ ವೃತ
  • ಎಡೆ ನೈವೇದ್ಯ (ನವರಾತ್ರಿಯಲ್ಲಿ ಮಾತ್ರ)
  • ಇಷ್ಟಾರ್ಥ ಸಿದ್ಧಿ ಸಂಕಲ್ಪ
ಇತರೆ ಹರಕೆ ಸೇವೆ ಬಗ್ಗೆ ಸಮಿತಿಯವರಿಂದ ಮಾಹಿತಿ ಪಡೆದುಕೊಳ್ಳಬೇಕಾಗಿ ವಿನಂತಿ.

Copyright 2021 www.jenukallamma.com  Inc. All Rights Reserved.
    ತಾಲೂಕಿನ ಕೋಡೂರು ಗ್ರಾ.ಪಂ ಹಾಗೂ ಮಾರುತಿಪುರ ಗ್ರಾ.ಪಂಗಳ ದಟ್ಟ ಕಾನನದ ನಡುವೆ ಬೃಹದಾಕಾರದ ಬಂಡೆಗಳ ನಡುವೆ ಕಂಗೊಳಿಸುತ್ತಿರುವ ಪ್ರಕೃತಿ ನಿರ್ಮಿತ ಏಕೈಕ ಗುಹಾಲಯವೆಂಬ ಕೀರ್ತಿಗೆ ಭಾಜನವಾದ ಅಮ್ಮನಘಟ್ಟ ಕ್ಷೇತ್ರಕ್ಕೆ ಎಂಟು ನೂರು ವರ್ಷಗಳ ಇತಿಹಾಸವಿದೆ. ಆಗ್ನೇಯ ಭಾಗದಲ್ಲಿ ಹಳೆಯ ಅಮ್ಮನಘಟ್ಟ ಪ್ರದೇಶವಿದ್ದು ಬೆಟ್ಟದ ಮುಕ್ಕಾಲು ಭಾಗ ದಕ್ಷಿಣ ದಿಕ್ಕಿನಲ್ಲಿದ್ದು ಶ್ರೀ ದೇವಿಯ ಗುಹಾಲಯಗಳಿಗೆ ಮೂಲ ವಾಸಸ್ಥಾನ ಮಾಡಿಕೊಂಡ ಬಗ್ಗೆ ಐತಿಹ್ಯವನ್ನು ಈ ಪ್ರದೇಶ ಹೊಂದಿದೆ. 
    ಈ ಸಾನಿಧ್ಯವನ್ನು ಜನಪದ ವರ್ಗಕ್ಕೆ ಪರಿಚಯಿಸಿದವರು ಈಡಿಗ ಜನಾಂಗದ ಪುರುಷರಾಗಿದ್ದ ಬಗ್ಗೆಯೂ ತಿಳಿದುಬಂದಿದೆ. ಇದರ ಪ್ರತೀಕವಾಗಿ ಈ ಜನಾಂಗದವರು ಕುಲದೇವತೆಯಾಗಿ ಇಂದಿಗೂ ಪೂಜೆ, ಹರಕೆ ಸಲ್ಲಿಸುವುದರ ಮೂಲಕ ಪಾವನರಾಗುತ್ತಿದ್ದಾರೆ. ಎಲ್ಲ ಭಕ್ತರ ದುಃಖ-ದುಮ್ಮಾನ, ರೋಗ-ರುಜಿನ ಸರ್ವತವುಗಳನ್ನು ನಿವಾರಿಸುತ್ತಿರುವುದೆ ಅಲ್ಲದೆ, ಬೆಳೆಗಳ ರಕ್ಷಣೆ, ಉತ್ತಮ ಫಸಲು, ಮಕ್ಕಳ ಆರೋಗ್ಯವನ್ನು, ವಿವಾಹ ಮಂಗಳಕಾರ್ಯಗಳನ್ನು ನಿರ್ವಿಘ್ನವಾಗಿ ನಡೆಸಿ ಕೊಡುತ್ತಿರುವ ಬಗ್ಗೆಯೂ ಹಲವಾರು ನಿದರ್ಶನಗಳು ಇಲ್ಲಿವೆ. ಶ್ರೀದೇವಿಗೆ ವಿಶೇಷವಾಗಿ ಉದ್ದಿನಿಂದ ತಯಾರಿಸಿದ ಕಜ್ಜಾಯ,ತುಪ್ಪ ಬೆಲ್ಲದಿಂದ ತಯಾರಿಸಿದ ಅನ್ನ ನೈವೇದ್ಯ, ಬೆಣ್ಣೆ ಸೇವೆ ಇಲ್ಲಿನ ವಿಶೇಷವಾಗಿವೆ. 
    ಆರಂಭದ ದಿನಗಳಲ್ಲಿ ಭಕ್ತರ ಭೇಟಿ ವಿರಳವಾಗಿದ್ದರೂ ನವರಾತ್ರಿ ಪ್ರಾರಂಭದಲ್ಲಿ ಸಹಸ್ರಾರು ಜನರು ಜಾತ್ರೆಗೆ ಭೇಟಿ ನೀಡುವುದಲ್ಲದೆ ಒಂದೇ ದಿನ ಸುಮಾರು 25 ಸಾವಿರಕ್ಕೂ ಅಧಿಕ ದಾಖಲೆಯ ಭಕ್ತಾದಿಗಳು ಪಾಲ್ಗೊಳ್ಳುವ ಮೂಲಕ ಶ್ರೀ ದೇವಿಯ ಕೃಪೆಗೆ ಪಾತ್ರರಾಗುವುದ ಶ್ರೀ ದೇವಿಯ ಮಹಿಮೆಯನ್ನು ರಾಜ್ಯಾದ್ಯಂತ ಪಸರಿಸುವಂತೆ ಮಾಡಿದೆ. ಒಟ್ಟಿನಲ್ಲಿ ದೇವಿಯ ದರ್ಶನ ಪಡೆಯುವವರಿಗೆ ಕೈ ಬಿಡದ ಅಮ್ಮ ಭಕ್ತಾದಿಗಳ ಭಕ್ತಿಗೆ ಸದಾ ಮನಸನ್ನು ತೆರೆದು ಬಂದ ಭಕ್ತರ ಕಷ್ಟ-ನಷ್ಟ, ಸಂಕಷ್ಟಗಳನ್ನು ನಿವಾರಿಸುತ್ತಿದ್ದಾಳೆ. more...

    ಮಾರ್ಗ: ಶ್ರೀ ಜೇನುಕಲ್ಲಮ್ಮ ದೇವಸ್ಥಾನವು ಹೊಸನಗರದಿಂದ ರಿಪ್ಪನ್ ಪೇಟೆ - ಶೀವಮೊಗ್ಗ ಮಾರ್ಗದಲ್ಲಿ  12 ಕಿ.ಮೀ ದೂರದ ಕೋಡೂರಿನ ಸಮೀಪದಲ್ಲಿದೆ. ಕೋಡೂರಿನ ಮುಖ್ಯ ರಸ್ತೆಯಿಂದ 3 ಕಿ.ಮೀ ದೂರ ದಟ್ಟ ಕಾನನದ ಬೆಟ್ಟ ಗುಡ್ಡಗಳ ಮದ್ಯೆ ನಿರ್ಮಿಸಿರುವ ರಸ್ಥೆಯಲ್ಲಿ ಸಾಗಿದಾಗ ಬಲಭಾಗದಲ್ಲಿ ದಟ್ಟ ಹಸಿರು ಕಾಡು-ಬೆಟ್ಟ, ಎಡಭಾಗದಲ್ಲಿ ಹಸಿರು ಮುರಿಯುವ ಪ್ರಪಾತ, ಅದರಾಚೆ ಆಕಾಶವನ್ನೇ ಎತ್ತಿಬಿಡಲೋ ಎಂಬಂತೆ ಎದ್ದು ನಿಂತ ಭದ್ರಾಕಾರದ ಪರ್ವತ, ಮುಸುಕಿದ ಇಬ್ಬನಿಯ ಮಂಜು, ಹಕ್ಕಿಗಳ ಚಿಲಿಪಿಲಿ ನಾದ, ಕಚಗುಳಿ ಇಡುವ ತಂಗಾಳಿ ಹೀಗೆ ವರ್ಣಿಸಲಸದಳವಾದ ಪ್ರಕೃತಿ ಸೌಂಧರ್ಯದ  ಮಡಿಲಿನಲ್ಲಿ ರಾರಾಜಿಸುತ್ತಿರುವ ಶ್ರೀ ಜೇನುಕಲ್ಲಮ್ಮನ ದೇವಸ್ಥಾನವು ಕಾಣಸಿಗುತ್ತದೆmore...

    ವಿನಂತಿ.
  ದೇವಸ್ಥಾನಕ್ಕೆ ಸೇವೆ ಮತ್ತು ದೇಣಿಗೆ ನೀಡುವವರು ಕೋಡೂರು ಕೆನರ ಬ್ಯಾಂಕ್ ನ ಖಾತೆಗೆ ಡಿ.ಡಿ ಯನ್ನು ತೆಗೆಯಬಹುದು ಕಾತೆ ನಂ. 1516101008701 ಅಥವಾ M. O ಮತ್ತು ಚೆಕ್ ಮೂಲಕ ಹಣ ಪಾವತಿಸಬಹುದು.
    ದೇವಸ್ಥಾನದಲ್ಲಿ ಸೇವೆ ಸಲ್ಲಿಸುವ ಭಕ್ತಾಧಿಗಳು ಸೇವೆಯ ರಶೀದಿಯನ್ನು ಕಡ್ಡಾಯವಾಗಿ ಪಡೆಯತಕ್ಕದ್ದು.
Designed by Invance Infotech, Shimoga.

  ನೂತನ ದೇವಾಲಯದ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ.  > ಇಲ್ಲಿ ಕ್ಲಿಕ್ಕಿಸಿ