‘ಯಾ ದೇವೀ ಸರ್ವಭೂತೇಷು ಪ್ರಕೃತಿ ರೂಪೇಣ ಸಂಸ್ಥಿತಾ’

ಶ್ರೀ ಜೇನುಕಲ್ಲಮ್ಮ ದೇವಸ್ಥಾನ, ಅಮ್ಮನಘಟ್ಟ, ಕೋಡೂರು, ಹೊಸನಗರ.
Sri Jenukallamma Temple, Ammanagatta, Koduru, Hosanagara.
www.jenukallamma.com
Copyright 2020 www.jenukallamma.com  Inc. All Rights Reserved.
Designed by Invance Infotech, Shimoga.
ಅಮ್ಮನ ಕುರಿತ ಹಾಡು:

ಜೇನುಕಲ್ಲವ್ವನಪರಿಷೆಗೆ ನಡೆಯಣ್ಣಾ|
ಬೆಟ್ಟದನೆತ್ತಿಲವಳ ನೆಲೆಯಣ್ಣಾ|| ಪ ||
        ಬುತ್ತಿಗಂಟುಕಟ್ಟಿಕೊಂಡು ಹರಕೆಹಾಡ್ಯ ಹಿಡಿದುಕೊಂಡು
        ಅಮ್ಮನಘಟ್ಟಕೆ ಹೊಂಟೇವಾ|
ಎತ್ತುಗಾಡಿಜೋಡು ನಾವು ಕಟ್ಟಿಕೊಂಡು
ಕೊಳಗಕ್ಕೆ ಭತ್ತ, ಕೋಸು ಹೇರಿಕೊಂಡು || ಪ ||
        ಹಿಂಗಾರದ ಹೂವು ಹಿಡಿದುಕೊಂಡು ಮುಗಿಲಎತ್ರಾನ್ನೇರಿಕೊಂಡು
        ಬಂದಾರೆ ದೇವಿಗೆ ಬಲು ಇಷ್ಟ.
ಬೆಳೆದ ಬೆಳೆ ಪಚ್ಚೆಪೈರು ಮೀಸಲು ಒಪ್ಪಿಸಿ
ತಾಯಿ ದುರುಗವ್ವನಮನಸಾ ಮೆಚ್ಚಿಸಿ ||ಪ ||
        ಮೈಯು ಮನಸಾ ಕೊಳೆಕಳೆದು ಬಗ್ಗಿ ಬಗ್ಗಿ ಶರಣು ಹೊಡ್ದು
        ಜೇನು ಕೋಪಕೆರಳದಾಂಗೆ ಓಡಿಯ್ಯಾಡಿ
ಹಿಗ್ಗಿ ಹಿಗ್ಗಿ ಹಿಗ್ಗಿ ಹಿಗ್ಗಿ ಜಾತ್ರೆ ಬಂದೈತೆ
ಕೊಡಗೂಸಕೈಯಬಳೆ ಘಲ್ಘಲ್ ಅಂದೈತೆ
        ಅಮ್ಮನ ಕಳಸ ಹೊತ್ತುಕೊಂಡು ಭಕ್ತಿಯಿಂದ ಶರಣು ಎಂದು
        ನಮ್ಮಮ್ಮನಪಾದವನೆನೆದೇವು
ಹೊಚ್ಚಹೊಸ ಬೆಣ್ಣೆಯ ಅಮ್ಮತಗೋಳೆ
ಎತ್ತು ದನ ಎಮ್ಮೆ ಕೋಳಿ ಬೆಳೆಸುವವಳೆ
        ಶೀತದಗಾಳಿಬಂದಂಗಾತು ನೇಸರಕಡಲೀಗಿಳಿದಂಗಾತು
        ಕರಿಮುಂಜಿಗುಮ್ಮಗವ್ವನೆಮುಸುಕೈತಿ
ಬುತ್ತಿಯುಂಟು ಎತ್ತುಗಾಡಿ ಮತ್ತೆ ಕಟ್ಟೋಣ
ವರುಷಕಾಯ್ವ ಅಮ್ಮನನ್ನು ನಂಬಿ ಬಾಳೋಣ || ಪ ||
                    
                        ಬಿ.ಶ್ರೀನಿವಾಸಸೊನಲೆ, ಹೊಸನಗರ
  ನೂತನ ದೇವಾಲಯದ ನಿರ್ಮಾಣ ಕಾರ್ಯ ಬರದಿಂದ ಸಾಗುತ್ತಿದೆ.  > ಇಲ್ಲಿ ಕ್ಲಿಕ್ಕಿಸಿ